ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಅನೇಕ ವಿದೇಶಿ ಕಂಪನಿಗಳು ತಮ್ಮ ಅಸ್ತಿತ್ವ ಸ್ಥಾಪಿಸಲು ಹಲವು ವರ್ಷಗಳನ್ನು ತೆಗೆದುಕೊಳ್ಳುತ್ತವೆ. ಆದರೆ ವಿಯೆಟ್ನಾಮ್‌ನ Vin Group ನ ಅಂಗ ಕಂಪನಿಯಾದ VinFast ಮಾತ್ರ ಕೇವಲ ಒಂದು ವರ್ಷದಲ್ಲಿ ಭಾರತದ ಟಾಪ್ 5 Electric Car ಕಂಪನಿಗಳ ಪಟ್ಟಿಗೆ ಸೇರಿ ಎಲ್ಲರ ಗಮನ ಸೆಳೆದಿದೆ.

2024ರ ಏಪ್ರಿಲ್‌ನಲ್ಲಿ VF6 ಮತ್ತು VF7 ಎಂಬ Compact ಮತ್ತು Midsize Electric SUV ಗಳೊಂದಿಗೆ ಭಾರತಕ್ಕೆ ಕಾಲಿಟ್ಟ VinFast, ತನ್ನ ಬಜೆಟ್ ಫ್ರೆಂಡ್ಲಿ ಬೆಲೆ, ಸ್ಟೈಲಿಶ್ ಡಿಸೈನ್ ಮತ್ತು ಉತ್ತಮ Battery Range ಮೂಲಕ ಗ್ರಾಹಕರ ಮನ ಗೆದ್ದಿದೆ. ಇತ್ತೀಚೆಗೆ ಕಂಪನಿ ತನ್ನ ಮೊದಲ 7-Seater Electric MPV ಆದ VF MPV 7 ಅನ್ನೂ ಭಾರತಕ್ಕೆ ತಂದಿದೆ.

ಮುಂದಿನ ದಿನಗಳಲ್ಲಿ VinFast ಭಾರತದಲ್ಲಿ ಹೊಸ ಬಜೆಟ್ Electric Cars ಮತ್ತು Electric Two-Wheelers ಕೂಡ ಲಾಂಚ್ ಮಾಡಲು ಸಿದ್ಧವಾಗಿದೆ.

VinFast VF6 — ಬಜೆಟ್ EV SUV

VinFast VF6

VinFast ನ ಅತ್ಯಂತ ಕಿಫಾಯಿತಿ ಮಾಡೆಲ್ ಆದ VF6 ರ Ex-Showroom ಬೆಲೆ ₹17.29 ಲಕ್ಷದಿಂದ ₹19.19 ಲಕ್ಷದವರೆಗೆ ಇದೆ. ಈ 5-Seater Electric SUV ನಲ್ಲಿ 59.6 kWh ಬ್ಯಾಟರಿ ಅಳವಡಿಸಲಾಗಿದ್ದು, ಒಂದೇ Full Charge ನಲ್ಲಿ 468 km ವರೆಗೆ ಓಡಬಲ್ಲದು. ಕಾರು 201.15 BHP ಪವರ್ ಉತ್ಪಾದಿಸುತ್ತದೆ.

ಬೆಲೆ (Ex-Showroom):   ₹17.29 – 19.19L

Battery Range:              468 km

Power:                          201.15 BHP

VinFast VF7 — 532 km Range ಸಹಿತ Midsize EV

VinFast VF7 EV

VinFast ನ ಅತ್ಯಂತ ಆಕರ್ಷಕ ಮಾಡೆಲ್ ಆದ VF7 ರ Ex-Showroom ಬೆಲೆ ₹21.89 ಲಕ್ಷದಿಂದ ₹26.79 ಲಕ್ಷದವರೆಗೆ ಇದೆ. ಈ 5-Seater SUV ನಲ್ಲಿ 59.6 kWh ರಿಂದ 70 kWh ವರೆಗಿನ Battery Pack ಆಯ್ಕೆ ಲಭ್ಯ. ಕಡಿಮೆ Battery Variant ನಲ್ಲಿ 438 km ಮತ್ತು ಹೆಚ್ಚಿನ Variant ನಲ್ಲಿ 532 km Range ದೊರಕುತ್ತದೆ. ಕಾರು 348.66 BHP ಪವರ್ ಹೊಂದಿದೆ.

ಬೆಲೆ (Ex-Showroom):  ₹21.89 – 26.79L

Battery Range:            438 – 532 km

Power:                         348.66 BHP

VinFast VF MPV 7 — 7 ಸೀಟಿನ ಫ್ಯಾಮಿಲಿ EV

VinFast VF MPV 7 EV

VinFast ಇತ್ತೀಚೆಗೆ ಭಾರತದಲ್ಲಿ ಲಾಂಚ್ ಮಾಡಿದ VF MPV 7 ರ Ex-Showroom ಬೆಲೆ ₹24.49 ಲಕ್ಷ. ಈ ಅಗಾಧ 7-Seater Electric MPV ನಲ್ಲಿ 60.13 kWh Battery ಇದ್ದು, Single Charge ನಲ್ಲಿ 517 km ವರೆಗೆ ಸಾಗಬಹುದು. ಕಾರು 201.2 BHP ಪವರ್ ಉತ್ಪಾದಿಸುತ್ತದೆ. Premium Interior ಮತ್ತು ಅಧಿಕ ಜಾಗ ಇದರ ಪ್ರಮುಖ ಆಕರ್ಷಣೆಗಳು.

ಬೆಲೆ (Ex-Showroom): ₹24.49L

Battery Range:          517 km

Seating:                    7 Seater

ಯಾಕೆ VinFast ಭಾರತದಲ್ಲಿ ಯಶಸ್ವಿಯಾಗಿದೆ?

VinFast ನ ಯಶಸ್ಸಿಗೆ ಮುಖ್ಯ ಕಾರಣಗಳೆಂದರೆ — ಬಜೆಟ್ ಫ್ರೆಂಡ್ಲಿ Pricing, ಉತ್ತಮ Battery Range, ಸ್ಟೈಲಿಶ್ ಡಿಸೈನ್ ಮತ್ತು Premium ಆಗಿ ಕಾಣಿಸುವ Interior. ₹17 ಲಕ್ಷದಿಂದ ₹27 ಲಕ್ಷದ ಒಳಗೆ 3 ವಿಭಿನ್ನ Segment ಗಳಲ್ಲಿ EV ಆಯ್ಕೆ ನೀಡುತ್ತಿರುವ ಕಂಪನಿ, ಭಾರತದ EV ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಸ್ಪರ್ಧಿಯಾಗಿ ಬೆಳೆಯುತ್ತಿದೆ.