ಆಟೋ ಡೆಸ್ಕ್, ಬೆಂಗಳೂರು: Mahindra Vision S SUV ಅನ್ನು ಮೊದಲ ಬಾರಿಗೆ ಕಂಪನಿಯ Freedom NU ಈವೆಂಟ್‌ನಲ್ಲಿ ಅನಾವರಣಗೊಳಿಸಲಾಗಿತ್ತು. ಅಂದಿನಿಂದ ಈ SUV ಯಾವಾಗ ಮಾರುಕಟ್ಟೆಗೆ ಬರಲಿದೆ ಎಂದು ಆಟೋ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಭಾರತದಲ್ಲಿ ಈಗಾಗಲೇ ಈ ಕಾರಿನ test mule ಹಲವು ಬಾರಿ ಕಾಣಿಸಿಕೊಂಡಿದೆ. ಇತ್ತೀಚೆಗೆ ಹಿಮಾಚಲ ಪ್ರದೇಶದ ಮಾನಾಲಿಯಲ್ಲಿ ಮತ್ತೊಮ್ಮೆ ಈ ಕಾರು ಟೆಸ್ಟಿಂಗ್ ಸಮಯದಲ್ಲಿ ಗಮನಕ್ಕೆ ಬಂದಿದೆ.

ಡಿಸೈನ್ ಹೇಗಿರಲಿದೆ?

Mahindra ಈ ಹೊಸ SUV ಗೆ ಬಾಕ್ಸಿ ಮತ್ತು ರೋಬಸ್ಟ್ ಲುಕ್ ನೀಡಲಿದೆ. ಕಾರಿನ ಮುಂಭಾಗದಲ್ಲಿ ನೇರವಾದ ಫ್ರಂಟ್ ಎಂಡ್ ಮತ್ತು ಫ್ಲ್ಯಾಟ್ ಬಾನೆಟ್ ನೋಡಬಹುದು. Test mule ಫೋಟೋಗಳಲ್ಲಿ ಮುಂಭಾಗದಲ್ಲಿ ದುಂಡಾದ LED headlights ಕಾಣಿಸಿಕೊಂಡಿವೆ. Mahindra Thar Roxx ಮಾದರಿಯಲ್ಲಿ ದುಂಡಾದ LED DRL ಕೂಡ ಸಿಗಬಹುದು ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ, ಕಾರಿನಲ್ಲಿ vertical slats ಹೊಂದಿರುವ grille ಮತ್ತು ಚೌಕಾಕಾರದ fog lamp housing ಕೂಡ ಕಾಣಿಸುತ್ತದೆ.

Side ಮತ್ತು Rear ಲುಕ್

Mahindra Vision S SUV

Vision S ಕಾರಿನ ಪಾರ್ಶ್ವ ನೋಟದಲ್ಲಿ ಎದ್ದು ಕಾಣುವ square wheel arches, ಬಾಡಿಯೊಳಗೆ ಅಡಗಿರುವ flush door handles ಮತ್ತು ದೊಡ್ಡ alloy wheels ನೋಡಬಹುದು. ಕಾರಿನ ಹಿಂಭಾಗದಲ್ಲಿ ಚಪ್ಪಟೆ ರಿಯರ್ ವಿಂಡ್‌ಶೀಲ್ಡ್, ದೊಡ್ಡ taillights ಮತ್ತು spare wheel ಕಾಣಿಸುತ್ತದೆ. ರೂಫ್ ಕೂಡ ಸ್ಕ್ವೇರ್ ಶೇಪ್‌ನಲ್ಲಿದ್ದು ಒಟ್ಟಾರೆ ವಿನ್ಯಾಸ ರಸ್ತೆಯಲ್ಲಿ ಗಮನ ಸೆಳೆಯುತ್ತದೆ.

ಯಾವ features ಸಿಗಬಹುದು?

ಈ ಬಾರಿ test mule ನ cabin ಕ್ಯಾಮರಾದಲ್ಲಿ ಸೆರೆಯಾಗಿಲ್ಲ. ಆದರೆ ಹಿಂದಿನ ಫೋಟೋಗಳಲ್ಲಿ interior ನೋಡಿದ್ದೇವೆ. Mahindra Vision S ನಲ್ಲಿ large panoramic sunroof, dual-screen setup ಮತ್ತು ವಿಭಿನ್ನ ವಿನ್ಯಾಸದ AC vents ನೀಡಲಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಇದರ ಜೊತೆಗೆ three-spoke steering wheel, dual-tone interior, ಸೀಟ್ ವೆಂಟಿಲೇಷನ್ ಮತ್ತು ಹೀಟಿಂಗ್, hill descent control, dual-zone climate control, ಡ್ರೈವ್ ಮೋಡ್ ಸೆಲೆಕ್ಟ್ ಮಾಡುವ ಆಯ್ಕೆ ಮತ್ತು traction control ಕೂಡ ಸಿಗಬಹುದು ಎಂದು ನಂಬಲಾಗಿದೆ.

ಸಂಭಾವ್ಯ Engine ವಿವರಗಳು

ಈ SUV ನ powertrain ಕುರಿತ ಸಂಪೂರ್ಣ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ. Launch ಹತ್ತಿರ ಬಂದಂತೆ ಹೆಚ್ಚಿನ ವಿವರಗಳು ಬಹಿರಂಗಗೊಳ್ಳಲಿವೆ. ಆದಾಗ್ಯೂ, Mahindra Vision S ನಲ್ಲಿ 1.2-liter turbo-petrol engine ಮತ್ತು 1.4-liter turbo-diesel engine ಆಯ್ಕೆಗಳನ್ನು ನೀಡಬಹುದು ಎಂದು ಅಂದಾಜಿಸಲಾಗಿದೆ. Transmission ಆಯ್ಕೆಗಳಲ್ಲಿ 6-speed manual, 6-speed DCT ಅಥವಾ AMT ಸೇರಿರಬಹುದು.

ಇದನ್ನೂ ಓದಿ: Nissan Tekton SUV July 2026ರಲ್ಲಿ ಭಾರತಕ್ಕೆ ಬರಲಿದೆ - ಇಂಜಿನ್‌ನಿಂದ ಹಿಡಿದು ಫೀಚರ್ಸ್‌ವರೆಗೆ ಸಂಪೂರ್ಣ ಮಾಹಿತಿ ಇಲ್ಲಿದೆ!